Tuesday, March 1, 2011

ಸಾಗರಿಯ ಟೈಮ್ ಪಾಸ್ ಕವನ

ಸಾಗರಿಯ ಟೈಮ್ ಪಾಸ್ ಬರಹದಿಂದ ಆಯ್ದ ಲೇಖನ ಕ್ಷಮಿಸಿ ಕವನ. ಅವರು ಟೈಮ್ ಪಾಸ್ ಗಾಗಿ ಬರೆದ ಕವನ ನನ್ನ ಮನಕ್ಕೆ ಇಷ್ಟವಾಯಿತು.


ಶಾಯಿ ಅಳಿಯುವುದೇ ?

Filed under: kavana — saagari @ 10:46 pm
ಮನಸ್ಸು ಬಿಳಿ ಹಾಳೆ ನಿಜ
ಇಲ್ಲವೆನ್ನರು ಯಾರೂ
ಹಾಳೆ ಮೇಲೆ ಬಿದ್ದ ಶಾಯಿಯ
ಅಳಿಸಲಾಗದು ಕಾಲವೂ!
ಈ ಹಾಳೆಯ ಮೇಲೆ ಬರಿಯ
ಕಹಿ ನೆನಪಿನದೆ ದಾಂಧಲೆ
ಕಾಣದೇಕೊ ಒಂದಾದರೂ
ಸವಿನೆನಪಿನ ದಾಖಲೆ !
ನೋವ ನಲಿವ ನಗುವ ಅಳುವ
ಒಂದೇ ಶಾಯಿ ಬರೆಯಿತು
ಸುಖವು ಮಾತ್ರ ಹಾಳೆಯಿಂದ
ಹೇಗೋ ಆವಿಯಾಯಿತು !
ಕಲೆಯು ಕಾಣದಿರಬಹುದು
ಮಾಸಿದಂತೆ ತೋರಬಹುದು
ಆದರೆ ಸುಪ್ತ ಜ್ವಾಲಾಮುಖಿಯದು
ಎಂದೋ ಭುಗಿಲೇಳಬಹುದು.
ಕಾಲ ವಾಸಿ ಮಾಳ್ಪುದಂತೆ
ಮನಸಿಗಾದ ಗಾಯವ
ಶಾಯಿಯಿಂದ ಆದ ಗುರುತ
ಅಳಿಸಲದಕೆ ಸಾಧ್ಯವಾ ?
*****************************
ಸುಮ್ನೆ…ಸೆಂಟಿಮೆಂಟಲ್ ಫೀಲ್ ಇರ್ಲಿ ಅಂತ  ಒಂದು ಕವನ ಬರೆಯಕ್ಕೆ ಟ್ರೈ ಮಾಡಿದೆ ಅಷ್ಟೇ..ನಿಜ ಅಲ್ಲ ಏನಲ್ಲ.   :)

No comments:

Post a Comment